ಕಾಂಗ್ರೆಸ್ 5ನೇ ಗ್ಯಾರೆಂಟಿ ಕೃಷಿ ಸಾಲ ಮನ್ನಾ :ಬಿ.ಆರ್.ಪಾಟೀಲ

ಕಲಬುರಗಿ: ಕಾಂಗ್ರೆಸ್ ಗ್ಯಾರೆಂಟಿಗಳಿಗೆ ಬಿಜೆಪಿ ಥಂಡಾ ಹೊಡೆದಿದೆ. ಐದನೇ ಗ್ಯಾರೆಂಟಿಯಾಗಿ ರೈತರ ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗುವುದು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಆಳಂದ ಕ್ಷೇತ್ರದಲ್ಲಿ ಸ್ಪ ರ್ಧಿಸಲು ಮುಂದೆ ಬಂದರೆ ಕ್ಷೇತ್ರ ಬಿಟ್ಟು ಕೊಡುತ್ತೇನೆ.
ನನಗೆ ರಾಜ್ಯ ರಾಜಕೀಯಕ್ಕಿಂತ ಕೇಂದ್ರದ ರಾಜಕೀಯ ಬಗ್ಗೆ ಹೆಚ್ಚಿನ ಆಸಕ್ತಿ. ಹಿಂದಿನಿಂದಲೂ ಕೇಂದ್ರದತ್ತ ಹೆಚ್ಚಿನ ಒಲವು ಹೊಂದಿದ್ದೇವೆ. ರಾಷ್ಟ್ರೀಯ ನಾಯಕರ ಜತೆ ಸಂಪರ್ಕ ಹೊಂದಿದ್ದೇವೆ. ಒಂದು ವೇಳೆ ಸಿದ್ದರಾಮಯ್ಯ ಆಳಂದಕ್ಕೆ ಬಂದರೆ ನಾನು ಕೇಂದ್ರದತ್ತ ಮುಖ ಮಾಡಲು ಸರಳವಾಗುತ್ತದೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರಂತೆ ಇನ್ನಷ್ಟು ವಿಕೆಟ್ಗಳು ಬಿಜೆಪಿಯಿಂದ ಪತನವಾಗಲಿವೆ. ಯಾರ್ಯಾರು ಬರುತ್ತಾರೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಬಿಜೆಪಿಯವರು ಕಾಂಗ್ರೆಸ್ಗೆ ಬರಲಿದ್ದಾರೆ ಎಂದರು.