ಅಸ್ಸಾಂನಲ್ಲಿ 'ಬಾಲ್ಯ ವಿವಾಹ' ತಡೆಗೆ ಸರ್ಕಾರದಿಂದ ಕಠಿಣ ಕ್ರಮ ; 4004 ಕೇಸ್ ದಾಖಲು, 1800 ಮಂದಿ ಅರೆಸ್ಟ್

ಅಸ್ಸಾಂನಲ್ಲಿ 'ಬಾಲ್ಯ ವಿವಾಹ' ತಡೆಗೆ ಸರ್ಕಾರದಿಂದ ಕಠಿಣ ಕ್ರಮ ; 4004 ಕೇಸ್ ದಾಖಲು, 1800 ಮಂದಿ ಅರೆಸ್ಟ್

ಸ್ಸಾಂ : ಅಸ್ಸಾಂನಲ್ಲಿ ಬಾಲ್ಯವಿವಾಹಗಳ ವಿರುದ್ಧದ ಕ್ರಮದಲ್ಲಿ ಕೈಗೊಂಡಿದ್ದು,ಇಂದು 1,800 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬಾಲ್ಯವಿವಾಹ ನಿಷೇಧ ಕಾಯ್ದೆ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಸ್ತುತ ರಾಜ್ಯಾದ್ಯಂತ ಬಂಧನಗಳು ನಡೆಯುತ್ತಿವೆ.

ಇಲ್ಲಿಯವರೆಗೆ 1800 ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ಕಾರ್ಯನಿರ್ವಹಿಸಲು ನಾನು ಅಸ್ಸಾಂ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಜನವರಿಯಲ್ಲಿ ಬಾಲ್ಯವಿವಾಹದ ವಿರುದ್ಧ ಅವರ ಸರ್ಕಾರವು ಪ್ರಾರಂಭಿಸಿದ ಶಿಸ್ತುಕ್ರಮದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಬಂದಿದೆ. ನಾಗಾವ್ ಸೇಇದಂತೆ ಇತರ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಶೇ. 42 ರಷ್ಟು ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಶೇ. 15 ರಷ್ಟು ಯುವತಿಯರು 18 ವರ್ಷಕ್ಕಿಂತ ಮೊದಲೆ ತಾಯಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.